ಕೂಗಿನ ಮಾರಯ್ಯ | ಕೊಟ್ಟಣದ ಸೋಮಮ್ಮ |
ಕೊಂಡೆ ಮಂಚಣ್ಣನಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ |
ಅಂಕಿತ: | ಅಗಜೇಶ್ವರಲಿಂಗ |
೭೫೧
ಆಯುಷ್ಯತೀರಲು ಮರಣ
ವ್ರತ ತಪ್ಪಲು ಶರೀರ ಕಡೆ.
ಮೇಲುವ್ರತವೆಂಬ ತೂತರ ಮೆಚ್ಚ
ನಮ್ಮ ಅಗಜೇಶ್ವರಲಿಂಗವು.
ಕಲ್ಯಾಣದ ಬಿಜ್ಜಳನ ಮಂತ್ರಿಯಾಗಿದ್ದ ಕೊಂಡೆ ಮಂಚಣ್ಣನ ಸತಿ. ಕಾಲ-೧೧೬೦. 'ಅಗಜೇಶ್ವರಲಿಂಗ' ಅಂಕಿತದಲ್ಲಿ
ಒಂದು ವಚನವನ್ನು ಮಾತ್ರ ಬರೆದಿದ್ದಾಳೆ. ವ್ರತಹೀನ ಡಾಂಭಿಕರ ತೀಕ್ಷ್ಣವಾದ ನಿಂದೆ ಇಲ್ಲಿದೆ.
ಕೂಗಿನ ಮಾರಯ್ಯ | ಕೊಟ್ಟಣದ ಸೋಮಮ್ಮ |