Previous ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ ಎಲೆಗಾರ ಕಾಮಣ್ಣ Next

ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ

*
ಅಂಕಿತ: ನಿಜಗುಣೇಶ್ವರಲಿಂಗ

ಕಾಗೆಯ ನಾಯ ತಿಂದವರಿಲ್ಲದ
ವ್ರತಭ್ರಷ್ಟನ ಕೂಡಿದವರಿಲ್ಲ.
ನಾಯಿಗೆ ನಾರಂಗವಕ್ಕುವುದೆ ?
ಲೋಕದ ನರಂಗೆ ವ್ರತವಕ್ಕುವುದೆ ಶಿವಬೀಜಕಲ್ಲದೆ ?
ನೀವೇ ಸಾಕ್ಷಿ ನಿಜಗುಣೇಶ್ವರಲಿಂಗದಲ್ಲಿ.

ಚೋಳಮಂಡಲದ ಕಾಂಚಿನಗರದ ಎಡೆಮಠದ ನಾಗಿದೇವ ಈಕೆಯ ಪತಿ. ಆತನೋಡನೆ ಕಲ್ಯಾಣದಲ್ಲಿ ಬಂದು ನೆಲೆಸುತ್ತಾಳೆ. 'ನಿಜಗುಣೇಶ್ವರಲಿಂಗ' ಅ೦ಕಿತದಲ್ಲಿ ಈಕೆಯ ಕೇವಲ ಒಂದು ವಚನ ದೊರೆತಿದೆ. ಅದರಲ್ಲಿ ವ್ರತದ ಮಹತ್ವ, ವ್ರತಭ್ರಷ್ಠನ ನಿಂದೆ ವ್ಯಕ್ತವಾಗಿದೆ.

ಪರಿವಿಡಿ (index)
*
Previous ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ ಎಲೆಗಾರ ಕಾಮಣ್ಣ Next