ಸಿದ್ಧರಾಮ ಶಿವಯೋಗಿ | ಮರ್ಕಟೇಶ್ವರ ?? |
ನಿ:ಕಳಂಕ ಚೆನ್ನ ಸೋಮೇಶ್ವರ |
ಈ ಅಂಕಿತದ ಅಜ್ಞಾತ ಕರ್ತೃ ಸು.1650ರಲ್ಲಿ ಇದ್ದಿರಬೇಕು. ಒಂದು ವಚನ ಮಾತ್ರ ದೊರೆತಿದ್ದು, ಸುಜ್ಞಾನಿ ಶರಣನ ಇರವನ್ನು ತಿಳಿಸುತ್ತದೆ. ಅಜ್ಞಾನವನ್ನು ಮರೆದು ಸುಜ್ಞಾನವನ್ನು ತೋರುವವನು ನಿಃಕಳಂಕ ಚೆನ್ನಸೋಮೇಶ್ವರ ಎಂದು ಹೇಳಲಾಗಿದೆ
ಬಟ್ಟಬಯಲೆಲ್ಲ ಗಟ್ಟಿಯಾದಡೆ
ಸ್ವರ್ಗಮರ್ತ್ಯಪಾತಾಳಕ್ಕೆ ಠಾವಿನ್ನೆಲ್ಲಿಯದೊ ?
ಕಷ್ಟವ ಮಾಡಲಾರದ ನರರುಗಳೆಲ್ಲ
ಸಂಸಾರವ ಬಿಟ್ಟಿವೆಂದು, ಮಂಡೆಗೆಲಸವ ಗೆಯಿಸಿದಡೆ
ಸುಜ್ಞಾನಿ ವಿರಕ್ತನಾಗಬಲ್ಲನೆ ? ಇದು ಕಾರಣ,
ಅಜ್ಞಾನವ ಮರೆದು, ಸುಜ್ಞಾನವ ತೋರುವುದೆ
ನಿಃಕಳಂಕ ಚೆನ್ನಸೋಮೇಶ್ವರ ತಾನೆ. /೧೨೯೫ [1]
[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.
ಸಿದ್ಧರಾಮ ಶಿವಯೋಗಿ | ಮರ್ಕಟೇಶ್ವರ ?? |