ಸೂಳೆ ಸಂಕವ್ವೆ

*
ಅಂಕಿತ: ನಿರ್ಲಜ್ಜೇಶ್ವರ
ಕಾಯಕ: ಶರಣೆಯಾಗುವುದಕಿಂತ ಮುಂಚೆ ವೇಶ್ಯಾವೃತ್ತಿ

1234
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.

ಹೆಸರ ಹಿಂದಿನ ವಿಶೇಷಣದಿಂದ ಈಕೆ ಮೊದಲು ವೇಶಾವೃತ್ತಿಯನ್ನು ಮಾಡುತ್ತಿದ್ದು, ನಂತರ ಶರಣ ಜೀವನದತ್ತ ಸಾಗಿಬಂದಂತೆ ತೋರುತ್ತದೆ. ಕಾಲ-೧೧೬೦. 'ನಿರ್ಲಜ್ಜೇಶ್ವರ' ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ತನ್ನ ವೃತ್ತಿ ಪರಿಭಾಷೆಯನ್ನು ಬಳಸಿಕೊಂಡು ವ್ರತನಿಷ್ಠೆಯನ್ನು ಕುರಿತು ಹೇಳುವ ಈಕೆಯ ಅಭಿವ್ಯಕ್ತಿಯಲ್ಲಿ ದಿಟ್ಟನಿಲುವು ತೋರುತ್ತದೆ.


*
Previousಸುಂಕದ ಬಂಕಣ್ಣಸೊಡ್ಡಳ ಬಾಚರಸNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.