*
ಅಂಕಿತ:
|
ಐಘಂಟೇಶ್ವರಲಿಂಗ
|
ಕಾಯಕ:
|
ಸತ್ತಿಗೆ ಕಾಯಕ (ಬಸವಣ್ಣನವರಿಗೆ ಛತ್ರಿ ಹಿಡಿಯುವ ಕಾಯಕ), ಮರ ಕಡಿಯುವ, ಪಂಜು ಹಿಡಿಯುವ ಕಾರ್ಯ
|
595
ಉದಯಕ್ಕೆ ಉತ್ಪತ್ಯವಾಗಿ, ಮಧ್ಯಾಹ್ನಕ್ಕೆ ಸ್ಥಿತಿಯಾಗಿ,
ಅಸ್ತಮಾನಕ್ಕೆ ಲಯವಹ ದೇಹವ ಹೊತ್ತು ಮತ್ತೆ,
ನಿಶ್ಚಿಂತದಲ್ಲಿ ನಿಂದು, ಕಷ್ಟವ ಬಿಡಿಸುವ ಠಾವ ತೋರಾ.
ಹಗಲಿಂಗೆ ಹಸಿವು ತೃಷೆ, ಇರುಳಿಂಗೆ ವಿಷಯ ವ್ಯಸನ ವ್ಯಾಪಾರ,
ಇಂತೀ ಘಟವ ಹೊಕ್ಕು,
ಐದಕ್ಕೆ ಒಡಲಾದೆಯಲ್ಲಾ ಐಘಂಟೇಶ್ವರಲಿಂಗಾ.
ಕೊಡೆ (ಸತ್ತಿಗೆ) ಹಿಡಿಯುವ ಕಾಯಕದ ಈತ, ಅದರ ಜೊತೆಗೆ ಮರ ಕಡಿಯುವ, ಪಂಜು ಹಿಡಿಯುವ ಕೆಲಸವನ್ನೂ ಮಾಡುತ್ತಿದ್ದನೆಂದು
ತಿಳಿದುಬರುತ್ತದೆ. ಅವನ ವಚನಗಳಲ್ಲಿ ಆಧಾರ ಸಿಕ್ಕುತ್ತವೆ. ಈತನ ಕಾಲ-೧೧೬೦, 'ಐಘಟೇಶ್ವರ' ಅಂಕಿತದಲ್ಲಿ
ಹತ್ತು ವಚನಗಳು ದೊರೆತಿವೆ. ಅವುಗಳಲ್ಲಿ ಈತನ ಕಾಯಕ ನಿಷ್ಠೆ, ಕಾಯಕ ತಪ್ಪುವವರ ಟೀಕೆ ಪ್ರಮುಖವಾಗಿವೆ.
ಕಾಯಕವೆಂದು ಕಲ್ಪಿಸಿ ಮಾಡುವಲ್ಲಿ,
ತುಡುಗುಣಿಯಂತೆ ಮಡದಿ ಮಕ್ಕಳಿಗೆಂದು
ಹೆಡಿಗೆ ಗಳಿಗೆಯಲ್ಲಿ ಹೊಯ್ದು, ಕಡ ಪರಪತಿಯೆಂದು ಕೊಟ್ಟಡೆ,
ಅದು ಗುರುಪರಚರ ಈ ಮೂರರೊಡವೆಯಲ್ಲ.
ಆತನು ಮೃಡಭಕ್ತನೆಂದು ಅವನ ಮನೆಯಲ್ಲಿ ಒಡಗೂಡಿ ಉಂಡಡೆ,
ಅಡಗ ನಾಯಿ ತಿಂದು, ಮಿಕ್ಕುದ ನರಿ ತಿಂದಂತೆ,
ಐಘಂಟೇಶ್ವರಲಿಂಗವೆ ಸಾಕ್ಷಿಯಾಗಿ.
596
ಒಂದ ಹಿಡಿವಲ್ಲಿ ಸತ್ತಿಗೆಯವ,
ಇದಿರ ಉಭಯದ ಸಂದ ಕಡಿವಲ್ಲಿ ಕೊಡಲಿಯವ.
ಹಿಂದುಮುಂದಣ ತಮವನೊಂದುಗೂಡಿ, ಕೆಡಿಸುವುದಕ್ಕೆ ಪಂಜಿನವ.
ಇದು ಅಂದು ಬಂದ ಬೆಸದ ಕಾಯಕ,
ಐಘಂಟೇಶ್ವರಲಿಂಗವಿದ್ದಲ್ಲಿಯೆ ಬೆಸನಿಲ್ಲದಿರಬೇಕು.
*