Previous ಮಲ್ಲಿಕಾರ್ಜುನ ಪಂಡಿತಾರಾಧ್ಯ ಮಾದಾರ ಧೂಳಯ್ಯ Next

ಮಳುಬಾವಿಯ ಸೋಮಣ್ಣ

*
ಅಂಕಿತ: ಮಳುಬಾವಿಯ ಸೋಮ

ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು.
ಸುಖವಿಲ್ಲದ ಸಂಸಾರ.
ಎಳತಟೆಗೊಂಬ ಕಾಯದ ಸಂಗ.
ಬಳಲಿಸುವ ಜೀವಭಾವ.
ಇವರ ಕಳವಳವಳಿದಲ್ಲದೆ
ಮಳುಬಾವಿಯ ಸೋಮನ ತಿಳಿಯಬಾರದು. /೧೧೫೪ [1]

ಈತನ ಜೀವನದ ವಿವರಗಳು ತಿಳಿದಿಲ್ಲ. ಕಾಲ-೧೬೫೦. ಅಂಕಿತ - ಮಳುಭಾವಿಯ ಸೋಮ. ಒಂದೇ ವಚನ ದೊರೆತಿದೆ. ವ್ಯರಾಗ್ಯಪರ ವಿಚಾರವನ್ನು ಸುಂದರವಾಗಿ ತಿಳಿಸಲಾಗಿದೆ.

ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು, ಸುಖವಿಲ್ಲದ ಸಂಸಾರ, ಎಳತಟಗೊಂಬ ಕಾಯದ ಸಂಗ, ಬಳಲಿಸುವ ಜೀವಭಾವ - ಇವುಗಳ ಚಿಂತೆಯನ್ನು ಬಿಟ್ಟಲ್ಲದೆ ಪರಮಾತ್ಮನನ್ನು ತಿಳಿಯಲಾಗದು ಎಂದಿರುವನು.

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮಲ್ಲಿಕಾರ್ಜುನ ಪಂಡಿತಾರಾಧ್ಯ ಮಾದಾರ ಧೂಳಯ್ಯ Next