ನನ್ನಯ್ಯ | ಶರಣ ಶರಣೆಯರು |
ಶರಣ ಶ್ರೀ ವೇಮನ ಮಹಾಕವಿ |
ಅಂಕಿತ: | ವಿಶ್ವದಾಭಿರಾಮ ವಿನುರವೇಮ (ವಿಶ್ವತೋಭಿರಾಮ ಕೇಳು ವೇಮ) |
ಕಾಯಕ: | ಪರಮಯೋಗಿ ಯಾಗುವುದಕ್ಕಿಂತ ಮುಂಚೆ ಭೋಗಾಸಕ್ತ |
ವೇಮನನ ಹುಟ್ಟೂರು ಮೂಗಚಿಂತಪಲ್ಲೆ, ಈ ಗ್ರಾಮ ಇರುವುದು ಆಂಧ್ರಪ್ರದೇಶದ ಚಂದ್ರಗಿರಿ (ಚಿತ್ತೂರು ಜಿಲ್ಲೆ) ತಾಲೂಕಿನಲ್ಲಿ ಕೊಂಡವೀಡು ಆನಂತರದ ಬೆಳವಣಿಗೆಯ ಪ್ರದೇಶ. ವೇಮನನ ಅಣ್ಣ ಗಂಡಿಕೋಟದ ಕೋಟೆಯ ಮೇಲ್ವಿಚಾರಣಾಧಿಕಾರಿಯಾಗಿದ್ದ ಎಂಬು ದನ್ನೂ ಸೂಚಿಸುವ ಪದ್ಯ ಒಂದಿದೆ. ಒಕ್ಕಲುತನ ನಡೆಸುವ ದರಲ್ಲಿ ಹೆಸರಾದ ಪಂಗಡಕ್ಕೆ ಸೇರಿದ ವೇಮನನ ಹಿರಿಯರು ರಾಜ್ಯಾಡಳಿತ ನಡೆಸುತ್ತಿದ್ದರು ಎನಿಸುತ್ತದೆ. ವೇಮನನ ಕಾಲದ ಬಗ್ಗೆ ಹಲವು ರೀತಿಯ ಅಭಿಪ್ರಾಯ ಗಳಿವೆ 1652 ರಲ್ಲಿ ಹುಟ್ಟಿದ್ದು ಎಂಬುದನ್ನು ಬಹುತೇಕರು ಒಪ್ಪಿದ್ದಾರೆ. ತಂದೆ ವೇಮ ಭೂಪಾಲ ಮತ್ತು ತಾಯಿ ಮಲ್ಲಮಾಂಬೆ, ಅಣ್ಣ ವ್ಯಾಪಾರಿ ವೆಂಕಾರೆಡ್ಡಿ, ಅತ್ತಿಗೆ ಹೇಮರಡ್ಡಿ ಮಲ್ಲಮ್ಮ. ವೇಮನ ಮೊದಲು ಭೋಗಿಗಳಾಗಿದ್ದು, ಅನಂತರ ಯೋಗ ಮಾರ್ಗವನ್ನು ಅನುಸರಿಸಿದ ಆಶುಕವಿ.
ವೇಮನ ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದಾರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ. ಪರಸ್ತ್ರೀ ಸಂಗದಲ್ಲಿ ವಿಷಯಾಸಕ್ತನಾದ ವೇಮನ ಭೋಗಾಸಕ್ತನಾಗುತ್ತಾನೆ. ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿ, ಮನೆಯ ಸಂಪತ್ತನ್ನೆಲ್ಲಾ ಹಾಳುಗೆಡವುತ್ತಾನೆ. ವೇಮನನಿಗೆ ಅತ್ತಿಗೆಯಾಗಿ ಬಂದ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲಳಾಗುತ್ತಾಳೆ. ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ. "ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನ ಆಕೆಯ ನಗ್ನದೇಹವನ್ನು ತದೇಕ ಚಿತ್ತನಾಗಿ ನೋಡಬೇಕು". ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ.
ವೇಮನ ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯಭಾವನೆ ಆವರಿಸಿ ಒಡನೆಯೇ ಗಾಬರಿಗೊಂಡು ಕಣ್ಮುಚ್ಚಿ
ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳು ವೇಮ||
-ಎಂದು ತತ್ವ್ತಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೊರಟವನು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.
ವೇಮನ ಮಹಾಕವಿ, ಪರಮಯೋಗಿ, ದಾರ್ಶನಿಕ, ಮಹಾಯೋಗಿ 16ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ. ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ಮಹಾಕವಿ, ಮಹಾಯೋಗಿಯಾಗಿದ್ದಾನೆ.
ನಯಮುಗಾನು ದೃಕ್ಕುನಾಳಂಬುಲೋನುಂಚಿ
ಭಯಮುಲೇಕವಟ್ಟಿ ಭ್ರಮಲನು ದೊಕ್ಕಿ
ಸ್ವಯಮುಗಾನು ಬುದ್ಧಿ ಸಾಧಿಂಚಿಚೂಡರಾ
ವಿಶ್ವದಾಭಿರಾಮ ವಿನುರವೇಮ।।
''ಕುರುಡು ನಂಬಿಕೆ, ಭ್ರಮೆಗಳನ್ನು ತುಳಿದು
ನಿರ್ಭಯನಾಗಿ ನಿಂತರೆ ಅಂತರಾಳದಿಂದ
ತಾನೇ ತಾನಾಗಿ ನೋಟ ಸ್ಪಷ್ಟವಾಗುತ್ತದೆ.
ಸ್ವತಂತ್ರವಾಗಿ ಬುದ್ಧಿ ಗಳಿಸು''
- ಈ ಮಾತನ್ನು ಹೇಳಿದವನು ವೇಮನ. ತೆಲುಗು ಭಾಷೆಯಲ್ಲಿನ ಬಹು ಜನಪ್ರಿಯ ಕವಿ.
ಕಿರಿದರಲ್ಲಿ ಹಿರಿದಾದ ಅರ್ಥ: ಕಿರಿಯ ವಾಕ್ಯದಲ್ಲಿ ಹಿರಿದಾದ ಅರ್ಥವನ್ನು ತುಂಬಿಸಿ ಹೇಳುವ ಚಾತುರ್ಯದಲ್ಲಿ ವೇಮನನಿಗಿಂತ ಶ್ರೇಷ್ಠ ಕವಿ ತೆಲುಗು ಸಾಹಿತ್ಯದಲ್ಲೇ ಬೇರೆ ಯಾರೂ ಇಲ್ಲ. ವೇಮನ ಬಳಸಿದ 'ಆಟವೆಲದಿ'' ಛಂದಸ್ಸು ನಾಲ್ಕು ಸಾಲುಗಳ ಪದ್ಯ ಇದೇ ತುಂಬಾ ಕಿರಿಯದು ಎಂದು ಕವಿಗಳ ಅಭಿಪ್ರಾಯ. ಅದರಲ್ಲೂ ಒ೦ದು ಸಾಲನ್ನು 'ವಿಶ್ವದಾಭಿರಾಮ ವಿನುರ ವೇಮ' ಎಂದು ಬಳಸಿಕೊಂಡು ಉಳಿದ ಮೂರೇ ಸಾಲಿನಲ್ಲಿ ವಾಮನನಂತೆ ಎಲ್ಲವನ್ನೂ ಆವರಿಸಿದ ತ್ರಿವಿಕ್ರಮ, ತೆಲುಗು ಸಾಹಿತ್ಯದಲ್ಲಿ ಬಳಕೆಯ ಭಾಷೆಯ ಸೊಗಸನ್ನು ಪದ್ಯರಚನೆಗೆ ಅಂಟಿಸಿದ ಮೊದಲಿಗೆ ವೇಮನ, ಜನರ ಬಾಯಲ್ಲೇ ಉಳಿದುಕೊಂಡು ಬಂದಿದ ವೇಮನನ ಪದ ಗಳನ್ನು ಮೊದಲ ಬಾರಿಗೆ 1829 ರಲ್ಲಿ ಸಂಗ್ರ ಹಿಸಿ, ಸಂಪಾದಿಸಿ, ಇಂಗ್ಲಿಷಿಗೆ ಅನುವಾದ ಮಾಡಿ ಪ್ರಕಟಿಸಿದ್ದು ಚಾರ್ಲ್ಸ್ ಫಿಲಿಪ್ ಬ್ರೌನ್ (ಸಿ. ಪಿ. ಬ್ರೌನ್) ಎಂಬಾತ. ಅ೦ದಿನಿ೦ದ ಅನೇಕ ಸಂಗ್ರಹಗಳು ಪ್ರಕಟವಾಗಿವೆ.
ವೈರಾಗ್ಯ- ಜ್ಞಾನಿಗಳ ಸಂಗಮವಾದ ವೇಮನನ್ನು ತೆಲುಗು ಸಾಹಿತ್ಯ ಚರಿತ್ರೆ ಇತ್ತೀಚಿನವರೆಗೂ ಕೈಬಿಟ್ಟು ಸಾಮಾನ್ಯ ಉಲ್ಲೇಖವೂ ಮಾಡದೆ ಇದ್ದುದಕ್ಕೆ ಕಾರಣ ವೇಮನನ ಮೊನಚು ಮಾತುಗಳೇ, ವೇದ- ಮತ ವಿರೋಧಿ, ಪಾಷಂಡಿ ಎಂಬ ಹೆಸರು ಗಳಿಸಿದ. ಎಲ್ಲಾ ಕುಲಗಳನ್ನು ನಿರ್ಮತ್ಸರವಾಗಿ ಖಂಡಿಸಿ ಎಲ್ಲರ ದ್ವೇಷಗಳಿಸಿದ. ಜನರಿಗೆ ಆಡುಭಾಷೆಯ ಕಾವ್ಯಭಾಷೆ ಅಲ್ಲ ಎಂಬ ಭಾವನೆ. 'ಪದವಿ, ಬಿರುದುಗಳನ್ನು ಗಳಿಸಿದ, ಪಂಡಿತರ ವರ್ಗಕ್ಕೆ ಸೇರದ ವನ ಕೃತಿಯಲ್ಲಿ ಎಂತಹ ಪಾಂಡಿತ್ಯ ವಿದ್ದೀತು?' ಎಂಬ ಲಘು ನೋಟ. ವೇಮನ ಯಾರನ್ನೂ ಮೆಚ್ಚಿ ಸಲು ಪದ್ಯ ಬರೆದವನಲ್ಲ ಕವಿಗಿಂತಲೂ ಆತ ಯೋಗಿ, ವೇದಾಂತ ರಹಸ್ಯ ಗಳನ್ನು ಜನರಿಗೆ ಹೇಳಿ ಅದು ಅವರ ಮನದಲ್ಲಿ ಸುಲಭವಾಗಿ ನಿಂತಿರಲು ಪದ್ಯಗಳನ್ನು ಹೇಳಿದವ. ಅದರೊಂದಿಗೆ ಜನರ ರೀತಿ-ನೀತಿ ಗಳನ್ನು, ಡೊಂಕುಗಳನ್ನು ಎತ್ತಿ ಹೇಳಿದ. ಯಾವ ಸಂಪ್ರದಾಯದ ಸಂಕೋಲೆಗೂ ಸಿಕ್ಕಿ ಬೀಳದೆ, ಬೆದರಿಕೆಗೆ ಜಗ್ಗದೆ, ವಿವೇಕ ಕಣ್ಣೆರೆದು ಜ್ಞಾನವನ್ನು ಗಳಿಸಬೇಕು ಎಂದು ಅವರು ಉಪದೇಶಿಸಿದರು.
ವಾಮನನ ಮೂರು ಪಾದಗಳಂತೆ ಮೂರೇ ಸಾಲುಗಳಿಂದ ಬಾಳಿನ ಸಾರ ಸರ್ವವನ್ನೆಲ್ಲಾ ಭಟ್ಟಿ ಇಳಿಸಿ, ಅದನ್ನು ಜನರ ಆಡುಮಾತಿ ನಲ್ಲಿಯೇ ಅವರಿಗೆ ಉಣ ಬಡಿಸಿ, ಅವರ ನಾಲಿಗೆಯ ಮೇಲೆ ಜೀವಂತವಾಗಿರುವಂತೆ ಪದ ರಚನೆ ಮಾಡಿದ. ಅವನು ಜನರ ಬಾಳನ್ನು ಚಿರಂತನವಾದ ಸ್ಥಾಯೀ ಮೌಲ್ಯ ದತ್ತ ತಿರುಗಿಸಲು ಪ್ರಯತ್ನಿಸಿದ.
1725 ರಲ್ಲಿ ವೇಮನ ಕಡಪ ಜಿಲ್ಲೆಯ ಪಾಮೂರಿನ ಬಳಿಯ ಗುಹೆಯೊಂದರಲ್ಲಿ ಲಿಂಗೈಕ್ಯರಾದರು. ಅಲ್ಲಿಯೇ ಅವರ ಗದ್ದುಗೆ (ಸಮಾಧಿ) ನಿರ್ಮಾಣ ಮಾಡಲಾಗಿದೆ. ವೇಮನನ ವಂಶದವರೇ ಕಟಾರಪಲ್ಲೆಯಲ್ಲಿ ವೇಮನನ ಗದ್ದುಗೆಯನ್ನು ಪೂಜಿಸುತ್ತಾ ಮಠವನ್ನು ಇಂದೂ ನಿರ್ವಹಿಸುತ್ತಿದ್ದಾರೆ. ವೇಮನ ಶಿಷ್ಯ ಪರಂಪರೆಯವರು ಇಂದೂ ಇರುವರು. ಸರ್ವಜ್ಞ ಮತ್ತು ವೇಮನನ ಸಾಹಿತ್ಯ ದಲ್ಲಿ ನೀತಿ ಕನ್ನಡದ ಸರ್ವಜ್ಞ ಮತ್ತು ತೆಲುಗಿನ ವೇಮನ ಇಬ್ಬರೂ ದಕ್ಷಿಣ ಭಾರತದ ಬಹು ದೊಡ್ಡ ಪ್ರಜಾ ಕವಿಗಳು, ಭಾರತೀಯ ಸಾಹಿತ್ಯದ ಶ್ರೇಷ್ಠ ಸಂತ ಕವಿಗಳು. ಇವರು ಕಾಲದ ದೃಷ್ಟಿಯಿ೦ದ ತುಂಬಾ ಹತ್ತಿರದವರು.
ಸರ್ವಜ್ಷ ೧೬ನೇ 16ನೇ ಶತಮಾನದವನಾದರೆ, ವೇಮನ 17ನೇ ಶತಮಾನದವನು. ಇಬ್ಬರೂ ಸ೦ಸಾರಿಗಳಲ್ಲ- ಸಂಚಾರಿಗಳು, ಜಂಗಮ ಕವಿಗಳು, ವಿರಕ್ತರು, ವೈರಾಗ್ಯ ಹೊಂದಿದವರು.
ವೇಮನ ಮತ್ತು ಸರ್ವಜ್ಷ ಇಬ್ಬರೂ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಹಾಗೂ ಅದರ ಪತನವನ್ನು ಕಂಡವರು. ಸರ್ವಜ್ಞ ಅರೆಬೆತ್ತಲೆಯ ಲೋಕ ಸಂಚಾರಿಯಾದರೆ ವೇಮನ ಪೂರ್ಣಬೆತ್ತಲೆಯ ಲೋಕ ಸಂಚಾರಿ. ಇಬ್ಬರೂ ಅನುಭಾವಿಗಳೂ ಸಮಾಜಮುಖಿಗಳೂ ಜ್ಞಾನಮುಖಿ ಗಳೂ ಹಾಗೂ ಮಹೋನ್ನತ ಪ್ರತಿಭೆ ಯುಳ್ಳವರು.
ಇವರು ಜನಸಾಮಾನ್ಯರ ಭಾವನೆಗಳಿಗೆ ಮೂರ್ತಸ್ವ ರೂಪವನ್ನು ನೀಡಿ ಸಮಾನ ಮನೋಧರ್ಮದ ಜನತಾ ಕವಿಗಳು ಎನಿಸಿಕೊಂಡವರು. ಕವಿ ಸರ್ವಜ್ಞ ತ್ರಿಪದಿ ಛಂದೋಪ್ರಕಾರದಲ್ಲಿ ವಚನಗಳನ್ನು ರಚಿಸಿದರೆ, ಕವಿ ವೇಮನ ಪದ್ಯ ರಚಿಸಿದ್ದು ಚೌಪದಿ ಛಂದೋಪ್ರಕಾರದಲ್ಲಿ. ಇವರಿಬ್ಬರ ಈ ಸಾಹಿತ್ಯ ಪ್ರಕಾರ ಕಿರಿಯದರಲ್ಲಿ ಹಿರಿಯ ಅರ್ಥವನ್ನು ಬೆಳಗಿಸಿದ್ದು ಮಾತ್ರ ವಿಶೇಷ. ಸರ್ವಜ್ಞ ಕವಿಯನ್ನು ಕೇಳದ, ತಿಳಿಯದ ಕನ್ನಡಿಗನಿಲ್ಲ. ಅಂತೆಯೇ ವೇಮನ ಕವಿಯ ಬಗ್ಗೆ ತಿಳಿಯದ ತೆಲುಗನಿಲ್ಲ. ಸಾರ್ವಕಾಲಿಕವಾದಂತೆ ತೆಲುಗರ ಮನೆಮಾತಾಗಿರುವ ವೇಮನನ ಕನ್ನಡಿಗರ ಮನೆಮಾತಾಗಿರುವ ಸರ್ವಜ್ಞನ ತ್ರಿಪದಿಗಳು ಚೌಪದಿಗಳೂ ಸಾರ್ವಕಾಲಿಕ ಸತ್ಯವಾಗಿವೆ. ಇಬ್ಬರ ಸಾಹಿತ್ಯವೂ ಜನಪ್ರಿಯ.
ಶಾಂತಿಯುತ ನೆಮ್ಮದಿಯ ಬದುಕಿಗೆ ಸರಿಮಾರ್ಗವನ್ನು ತೋರಿಸುವುದು ಹಾಗೂ ಮಾನವ ಕಲ್ಯಾಣದ ಆಶಯ ಇವರ ಸಾಹಿತ್ಯದ ಉದ್ದೇಶವಾಗಿದೆ.
"ಮಹಾಯೋಗಿ ವೇಮನ", "ವಚನಕಾರ ವೇಮನ" ನೆಂದು ಕರೆಯಲ್ಪಡುತ್ತಾರೆ..
೧] ಊರಿನ ಜನರಿಗೆ ವೈಚಾರಿಕತೆ ತಿಳಿಸುತ್ತಿದ್ದರು
೨] ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿದ್ದರು
೩] ನಗ್ನ ಶರೀರವನ್ನು ಕಂಡು ಜಿಗುಪ್ಸೆ
೪] ಅತ್ತಿಗೆಯ ಪಾದವಿಡಿದು ಶರಣಾಗತರಾದರು
೫] ಅತ್ತಿಗೆಯಾದ ಶರಣೆ ಹೇಮರೆಡ್ಡಿ ಮಲ್ಲಮ್ಮ ಲಿಂಗದೀಕ್ಷೆ ಪಡೆದರು
೬] ಶರಣರ ಬಳಗಕಟ್ಟಿ ಊರೂರು ತಿರುಗಿದರು
೭] ಬಸವ ಧರ್ಮ ಪ್ರಚಾರ ಮಾಡಿದರು
೮] ತೆಲುಗಿನಲ್ಲಿ ಲಿಂಗತತ್ವ ವಚನ ರಚಿಸಿದರು
೯] ೩೦೦೦ ವಚನ ರಚಿಸಿದರು
೧೦] ಬಸವಣ್ಣನವರನ್ನು ಭಕ್ತಿ ಚಕ್ರವರ್ತಿ ಎಂದವರು
೧೧] ತೆಲುಗಿನ ಸರ್ವಜ್ಞ ಶರಣ ಇವರು
೧೨] ಬಸವ ಧರ್ಮಕ್ಕೆ ತೆಲುಗಿನಲ್ಲಿ ೩೦೦೦ ವಚನಗಳನ್ನು ಕೊಟ್ಟವರು
ಬರುವಾಗ ಬಟ್ಟೆ ಇಲ್ಲ,
ಹೋಗುವಾಗ ಬಟ್ಟೆ ಇಲ್ಲ,
ನಡುವೆ ಬಟ್ಟೆಯೇಕೆ?
ವಿಶ್ವದಾಭಿರಾಮ ಕೇಳು ವೇಮ.
ಎಂಬ ವಚನ ರಚಿಸಿ ಸಂಸಾರದ ನಶ್ವರತೆಯನ್ನು ತಿಳಿಸಿದ ವೇಮನ ಶರಣ. ಭಕ್ತಿ ಚಕ್ರವರ್ತಿ ಬಸವಣ್ಣನವರನ್ನು ಎಂದು ತಮ್ಮ ವಚನದಲ್ಲಿ ಹೇಳಿದ ವೇಮನ.
ಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಮೈದುನರಾದ ಬಸವಯೋಗಿ ವೇಮನರ ಚರಿತ್ರೆ ಮತ್ತು ವಚನಗಳನ್ನು ಓದಿ, ಪ್ರಚಾರ ಮಾಡಿ.
ನನ್ನಯ್ಯ | ಶರಣ ಶರಣೆಯರು |