Previous ಹಾವಿನಾಳ ಕಲ್ಲಯ್ಯ ಹೆಂಡದ ಮಾರಯ್ಯ Next

ಹುಂಜಿನ ಕಾಳಗದ ದಾಸಯ್ಯ

*
ಅಂಕಿತ: ಚಂದ್ರಚೂಡೇಶ್ವರಲಿಂಗವೆ
ಕಾಯಕ: ಹುಂಜಿನ ಕಾಳಗ ಆಡಿಸುವವನು

೧೧೯೨
ಹುಂಜ ಸೋತಡೆ ಹಿಡಿವೆ.
ವ್ರತ ಹೋದವರ ನೋಡೆನು,
ಚಂದ್ರಚೂಡೇಶ್ವರಲಿಂಗವೆ.

ಹುಂಜಿನ ಕಾಳಗ ಏರ್ಪಡಿಸುವುದು ಈತನ ಕಾಯಕ. ಕಾಲ-೧೧೬೦. 'ಚಂದ್ರಚೂಡೇಶ್ವರ ಲಿಂಗ' ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ಇದರಲ್ಲಿ ಇವನ ವೃತ್ತಿಸೂಚನೆ, ವ್ರತನಿಷ್ಠುರತೆ, ವ್ರತಹೀನರ ನಿಂದೆ ವ್ಯಕ್ತವಾಗಿದೆ. `ವ್ರತ ಹೋದವರ ನೋಡೆನು' ಎನ್ನುವ ಮೂಲಕ ವ್ರತದ ಮೇಲಿನ ನಿಷ್ಠೆಯನ್ನು ಪ್ರಕಟಪಡಿಸಿರುವನು. ಮೂರೇ ಸಾಲಿನ ವಚನ ಇವನದು.

ಪರಿವಿಡಿ (index)
*
Previous ಹಾವಿನಾಳ ಕಲ್ಲಯ್ಯ ಹೆಂಡದ ಮಾರಯ್ಯ Next