ರಾಯಸದ ಮಂಚಣ್ಣರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮಲದ್ದೆಯ ಸೋಮಯ್ಯ/ಲದ್ದೆಯ ಸೋಮವಚನ ಭಂಡಾರಿ ಶಾಂತರಸವೀರಗೊಲ್ಲಾಳವೇದಮೂರ್ತಿ ಸಂಗಣ್ಣವೇಮನ ಮಹಾಕವಿವೈದ್ಯ ಸಂಗಣ್ಣಶಂಕರ ದಾಸಿಮಯ್ಯಶಿವನಾಗಮಯ್ಯಶಿವಲೆಂಕ ಮಂಚಣ್ಣಷಣ್ಮುಖಸ್ವಾಮಿಸಂಗಮೇಶ್ವರ ಅಪ್ಪಣ್ಣಸಕಳೇಸ ಮಾದರಸಸಗರದ ಬೊಮ್ಮಣ್ಣಸತ್ತಿಗೆ ಕಾಯಕದ ಮಾರಯ್ಯಸತ್ಯಕ್ಕಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆಸಿದ್ಧರಾಮ ಶಿವಯೋಗಿಸಿದ್ಧಾಂತಿ ವೀರಸಂಗಯ್ಯಸ್ವತಂತ್ರ ಸಿದ್ಧಲಿಂಗೇಶ್ವರಸುಂಕದ ಬಂಕಣ್ಣಸೂಳೆ ಸಂಕವ್ವೆಸೊಡ್ಡಳ ಬಾಚರಸಹೆಂಡದ ಮಾರಯ್ಯಹಡಪದ ಅಪ್ಪಣ್ಣಹಡಪದ ರೇಚಣ್ಣಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮಹಾವಿನಾಳ ಕಲ್ಲಯ್ಯಹುಂಜಿನ ಕಾಳಗದ ದಾಸಯ್ಯಹೇಮಗಲ್ಲ ಹಂಪಹೊಡೆಹುಲ್ಲ ಬಂಕಣ್ಣಹರಳಯ್ಯ
ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ?? :👈 👉:ಈಶ್ವರೀಯ ವರದ ಚೆನ್ನರಾಮ

ಆನಂದ ಸಿದ್ಧೇಶ್ವರ ??

ಈ ಅಂಕಿತದ ವಚನಗಳ ಕರ್ತೃ ಅಜ್ಞಾತ, ಕಾಲ ಸು.1600 ಸದ್ಯ ಎರಡು ವಚನಗಳು ದೊರೆತಿವೆ. ಸಂಸಾರ ಸಾಗರದಲ್ಲಿ ಮುಳುಗಿದ ಅಜ್ಞಾನಿಗಳ ನಿಂದೆ ಮತ್ತು ಶರಣರ ನಿಲುವು ಇವುಗಳಲ್ಲಿ ನಿರೂಪಿತವಾಗಿವೆ.

ಕಂಗಳ ಸುಖ ಕರ್ಮವೆಂಬುದನರಿಯರು.
ಕಿವಿಯ ಸುಖ ಕೇಡೆಂಬುದನರಿಯರು.
ನಾಸಿಕದ ಸುಖ ಹೇಸಿಕೆಯೆಂಬುದನರಿಯರು.
ಬಾಯಸುಖ ಭ್ರಮೆಯೆಂಬುದನರಿಯರು.
ಕಾಂಕ್ಷೆಯ ಸುಖ ಹುಚ್ಚೆಂಬುದನರಿಯರು.
ಇಂತಪ್ಪ ವಿಷಯಾಬ್ಧಿಗಳೊಳಗೆ
ಮುಳುಗುತ್ತಿಪ್ಪ ಅಜ್ಞಾನಿಜಡರುಗಳ
ಎನ್ನತ್ತ ತೋರದಿರಾ, ಆನಂದ ಸಿದ್ಧೇಶ್ವರಾ. /೧೨೧೯ [1]

ವಿಷಯವೆನ್ನುವ ಸಮುದ್ರದಲ್ಲಿ ಮುಳುಗೇಳುತ್ತಿರುವ ಅಜ್ಞಾನಿ ಜಡರುಗಳನ್ನು ಎನ್ನತ್ತ ತೋರದಿರು ಎಂದು ತನ್ನ ಇಷ್ಟ ದೈವದಲ್ಲಿ ಪ್ರಾರ್ಥಿಸಿರುವನು. ಸಮತೆಯೇ ಪ್ರಧಾನವಾಗಿರುವ ಶರಣನಿಗೆ ಅಂಬಲಿಯೂ ಸರಿ, ಅಮೃತವೂ ಸರಿ, ಹಂಚೂ ಸರಿ, ಕಂಚೂ ಸರಿ, ತಟ್ಟೂ ಸರಿ, ತಗಡೂ ಸರಿ, ರೆಂಬೆಯೂ ಸರಿ, ಸಿಂಬೆಯೂ ಸರಿ, ಅರಸೂ ಸರಿ, ಆಳೂ ಸರಿ, ಊರೂ ಸರಿ, ಕಾಡೂ ಸರಿ, ಸ್ತುತಿಯೂ ಸರಿ, ನಿಂದೆಯೂ ಸರಿ ಎನ್ನುವನು.

ಮೃದು ಕಠಿಣ ಶೀತೋಷ್ಣಾದಿಗಳನರಿಯದನ್ನಕ್ಕ
ಅರ್ಪಿತವ ಮೀರಲಾಗದು.
ಅಂಗವುಂಟಾದಡೆ ಲಿಂಗವಲ್ಲದೆ ಅರಿಯಲರಿಯದೊ.
ಅಭಂಗ ಶರಣಂಗೆ ಅಂಬಲಿಯೂ ಸರಿ, ಅಮೃತವು ಸರಿ.
ಹಂಚೂ ಸರಿ ಕಂಚೂ ಸರಿ, ತಟ್ಟೂ ಸರಿ ತಗಡೂ ಸರಿ.
ರೆಂಬೆಯೂ ಸರಿ ಸಿಂಬೆಯೂ ಸರಿ, ಅರಸೂ ಸರಿ ಆಳೂ ಸರಿ.
ಊರೂ ಸರಿ ಕಾಡೂ ಸರಿ, ಸ್ತುತಿಯೂ ಸರಿ ನಿಂದೆಯೂ ಸರಿ.
ಇಂತಿವ ಮೀರಿದ ಮಹಾಪುರುಷನ ನಿವಲ
ಇಳೆಯೊಳಗಣವರೆತ್ತ ಬಲ್ಲರಯ್ಯಾ, ಆನಂದ ಸಿದ್ಧೇಶ್ವರಾ. /೧೨೨೦ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ?? :👈 👉:ಈಶ್ವರೀಯ ವರದ ಚೆನ್ನರಾಮ
*