ಅಪ್ಪಿದೇವಯ್ಯ

*
ಅಂಕಿತ: ಈಶ್ವರೀಯ ವರದ ಮಹಾಲಿಂಗ

ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ,
ರೋಷ ಹರುಷವ ಕೆಡಿಸದ ಲಿಂಗವ ಪೂಜಿಸೆ,
ತಾಮಸಭ್ರಮೆಯನಳಿಯದ ಜಂಗಮಕ್ಕೆ ದಾಸೋಹವ ಮಾಡೆ,
ಪರಮಾನಂದವಲ್ಲದ ಪಾದೋದಕವ ಕೊಳ್ಳೆ,
ಪರಿಣಾಮವಲ್ಲದ ಪ್ರಸಾದವನುಣ್ಣೆ,
ಆನೆಂಬುದನಳಿಯದ ಈಶ್ವರೀಯ ವರದ ಮಹಾಲಿಂಗನನೇನೆಂದೆಂಬೆ!

'ಈಶ್ವರೀಯ ವರದ ಮಹಾಲಿಂಗ' ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ನಾನೆಂಬುದನ್ನು ಅಳಿಯುವ, ಗುರು-ಲಿಂಗ-ಜ೦ಗಮ ಪಾದೋದಕ ಪ್ರಸಾದವನೊಲ್ಲೆನೆಂದು ನಿರಾಕರಿಸುವ ದಿಟ್ಟನಿಲವು ಇದರಲ್ಲಿ ಸುಂದರವಾಗಿ ವ್ಯಕ್ತವಾಗಿದೆ.

ಪರಿವಿಡಿ (index)
*
Previousಆನಾಮಿಕ ನಾಚಯ್ಯಅಮರಗುಂಡದ ಮಲ್ಲಿಕಾರ್ಜುನ ತಂದೆNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.