ಏಕಾಂತವೀರ ಸೊಡ್ಡಳ | ಗುರುವರದ ವಿರೂಪಾಕ್ಷ |
ಏಕೋರಾಮೇಶ್ವರಲಿಂಗ |
ಸು.1500ರಲ್ಲಿ ಇದ್ದಿರಬಹುದು. ಈ ಅಂಕಿತದ ವಚನಕಾರನ ಹೆಸರು ತಿಳಿದು ಬಂದಿಲ್ಲ. ಒಂದೇ ವಚನ ದೊರೆತಿದ್ದು, ಅದರಲ್ಲಿ ಲಿಂಗಸುಖಿಯಾದ ಶರಣನ ಸ್ಥಿತಿಯನ್ನು ವರ್ಣಿಸಲಾಗಿದೆ.
ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನಡೆವುದು.
ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನುಡಿವುದು.
ನಿಂದೆ ಬೇಡ, ಪರನಿಂದೆ ಬೇಡ.
ಅವರಾದಡೇನು ? ಹೋದಡೇನು ?
ತಾನು ಸುಖಿಯಾದಡೆ ಸಾಕು.
ಏಕೋರಾಮೇಶ್ವರಲಿಂಗದ ನಿಜವನರಿದಡೆ,
ಬೀಗಿ ಬೆಳೆದ ರಾಜಾನ್ನದ ತೆನೆಯಂತಿರಬೇಕು, ಶರಣ./೧೨೨೪ [1]
ಬೀಗಿ = ದಪ್ಪವಾಗಿ
[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.
ಏಕಾಂತವೀರ ಸೊಡ್ಡಳ | ಗುರುವರದ ವಿರೂಪಾಕ್ಷ |