ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ

*
ಅಂಕಿತ: ಅಮುಗೇಶ್ವರಲಿಂಗ

ಗರುಡಿಯಲ್ಲಿ ಕೋಲಲ್ಲದೆ ಕಾಳಗದಲ್ಲಿ ಕೋಲುಂಟೆ ?
ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ ಭಕ್ತಂಗುಂಟೆ ?
ವ್ರತ ತಪ್ಪಲು ಶರೀರವಿಡಿವ ನರಕಿಗೆ ಮುಕ್ತಿಯಿಲ್ಲ
ಅಮುಗೇಶ್ವರಲಿಂಗದಲ್ಲಿ.

ಈಕೆ ಬಸವಣ್ಣನವರ ಆಪ್ತಕಾರ್ಯದರ್ಶಿಯೂ ವಚನಕಾರನೂ ಆಗಿದ್ದ 'ರಾಯಸದ ಮಂಚಣ್ಣ'ನ ಪತ್ನಿ, ಕಾಲ-೧೧೬೦. ವ್ರತನಿಷ್ಠೆಯನ್ನು ಬೋಧಿಸುವ ಒಂದು ವಚನ ಈಕೆಯ ಹೆಸರಿನಲ್ಲಿ ದೊರೆತಿದೆ. ಅಂಕಿತ 'ಅಮುಗೇಶ್ವರಲಿಂಗ'. ಇದು ಅಮುಗೆ ರಾಯಮ್ಮನ ಅಂಕಿತವೂ ಆಗಿರುವುದು ವಿಶೇಷ.


*
Previousರಾಯಸದ ಮಂಚಣ್ಣರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.