Previous ನಿ:ಕಳಂಕ ಚೆನ್ನ ಸೋಮೇಶ್ವರ ಮಹಾಲಿಂಗ ವೀರ ರಾಮೇಶ್ವರ Next

ಮರ್ಕಟೇಶ್ವರ ??

*

ಅಜ್ಞಾತವಾಗಿರುವ ಈ ಅಂಕಿತದ ವಚನದ ಕರ್ತೃವಿನ ಕಾಲ ಸು. 1600. ದೊರೆತ ಒಂದು ವಚನ ನಿಜವಿರಕ್ತನ ಲಕ್ಷಣವನ್ನು ತಿಳಿಸುತ್ತದೆ.

ಹೇಮ ಕಾಮಿನಿ ಭೂಮಿ ಜೀವರಾಧಾರ,
ಜೀವರ ಪ್ರಾಣ, ಜೀವರ ಸಿಕ್ಕು ತೊಡಲು.
ಇಹಪರದೊಳಗೆ ಜಂಘೆಯ ಬಿಟ್ಟು,
ಲಂಘಿಸಿ ನಿಂದಾತನೆ ವಿರತಿ ಸಮಗ್ರ ಕಾಣಾ,
ಮರ್ಕಟೇಶ್ವರಾ./೧೩೪೬ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previous ನಿ:ಕಳಂಕ ಚೆನ್ನ ಸೋಮೇಶ್ವರ ಮಹಾಲಿಂಗ ವೀರ ರಾಮೇಶ್ವರ Next