*
ಅಂಕಿತ:
|
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು
|
ಕಾಯಕ:
|
ಗಂಧ ತೇಯುವುದು/ನರ್ತನ ಕಾಯಕ
|
೫೦೦
ಬಸವ ಮಾಡಿಹನೆಂದು ಬಾಯಲ್ಲಿ ಬಸಿವ
ಲೊಳೆಯನರಿಯದೆ ಎಸಕದಿಂದ ಮಾಡುವ
ಹುಸಿಭಕ್ತಿಯನರಿಯದ ಈ ಕಿಸಿವಾಯರಿಗೇಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
ಈತನ ಮೊದಲ ಹೆಸರು ಮುದ್ದಣ್ಣ. ಗಂಧ ತೇಯುವುದು ಈತನ ಕಾಯಕ. ವಿಷಮ ಸಂಸಾರದಿಂದ ಬೇಸತ್ತು ವಿರಕ್ತನಾದನು.
ಈತನ ಘನವ್ಯಕ್ತಿತ್ವವನ್ನು ಕುರಿತು ಅನೇಕ ಶರಣರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಶೂನ್ಯ ಸಂಪಾದನೆಯಲ್ಲಿ
ಈತನಿಗಾಗಿ ಒಂದು ಅಧ್ಯಾಯವನ್ನು ಮೀಸಲಾಗಿಡಲಾಗಿದೆ.
'ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು' ಅಂಕಿತದಲ್ಲಿ ಈತನ ೧೫0 ವಚನಗಳು ದೊರಿತಿವೆ.
ಅವುಗಳಲ್ಲಿ ತತ್ವನಿಷ್ಠೆ, ಸತ್ಯ ನಿಷ್ಠುರತೆ, ಸಮಕಾಲೀನ ಶರಣರ ಬಗೆಗಿನ ಗೌರವ, ಕೆಲವು ಚಾರಿತ್ರಿಕ
ಸಂಗತಿಗಳು ಅಳವಟ್ಟಿವೆ.
೫೧೯
ಲಿಂಗವೆನ್ನೆ ಲಿಂಗೈಕ್ಯವೆನ್ನೆ.
ಸಂಗವೆನ್ನೆ ಸಮರಸವೆನ್ನೆ.
ಆಯಿತ್ತೆನ್ನೆ ಆಗದೆನ್ನೆ, ನೀನೆನ್ನೆ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಏನೆಂಬುದಕ್ಕೆ ಮುನ್ನವೆ ಇಲ್ಲ, ನಿಲ್ಲು[ಮಾಣು]
೫೨೦
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ,
ಎನ್ನ ಅಂಗದೊಳಗಾಗು.
ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು.
ಆಗೆಂಬುದಕ್ಕೆ ಮುನ್ನವೆ ಆ ಗುಂಡು
ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ,
ಕಾಯವಡಗಿ, ಭಾವವೆಂಬ ಬಯಲಾಯಿತ್ತು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ.
*